ಕನ್ನಡ ಸಿನಿಮಾ ಇಂಡಸ್ಟ್ರಿ ಯು ಒಂದು ಅತಿ ವೇಗವಾಗಿ ಬೆಳೆಯುತ್ತಿರುವಂತಹ ಫಿಲಂ ಇಂಡಸ್ಟ್ರಿ ಯಾಗಿದೆ. ಕೆಜಿಎಫ್ ಮತ್ತು ಕಾಂತಾರಗಳಂತಹ ದೊಡ್ಡ ಸಕ್ಸಸ್ ಗಳ ನಂತರ ಕನ್ನಡ ಸಿನಿಮಾ ಭಾರತದಲ್ಲಿ ಒಂದು ವೇದಿಕೆಯನ್ನು ಸಿದ್ಧಪಡಿಸಿದೆ. ಕನ್ನಡ ಸಿನಿಮಾ ಇಂಡಸ್ಟ್ರಿ ಯಾವಾಗಲೂ ಹೊಸತರ ಪ್ರಯೋಗಗಳಿಂದ ಮತ್ತು ಸುಂದರವಾದ ಸಿನಿಮಾ ಟೋಗ್ರಾಫಿ ಯಿಂದ ಹೆಸರು ಮಾಡಿದೆ. ಹಾಗಾದರೆ ನೀವು ಹೇಗೆ ಈ ಸಿನಿಮಾಗಳನ್ನ ನಿಮ್ಮ ಮನೆಯಿಂದಲೇ ನೋಡಬಹುದು ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ.
Kannadamovie.blog
ಇದೊಂದು ಯುಟ್ಯೂಬ್ ಚಾನೆಲ್ ಮತ್ತು ಜಾಲತಾಣವಾಗಿದ್ದು ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ಕನ್ನಡದಲ್ಲಿ ವಿವರಿಸುವ ಮೂಲಕ ಜನರಿಗೆ ತಲುಪಿಸುವ ಪ್ರಯತ್ನವನ್ನ ಮಾಡುತಿದ್ದೇವೆ. ದಯವಿಟ್ಟು ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿಕೊಳ್ಳುವ ಮೂಲಕ ನಿಮ್ಮ ಪ್ರೋತ್ಸಾಹ ಮತ್ತು ಅನಿಸಿಕೆಯನ್ನು ಹಂಚಿಕೊಳ್ಳಿ.

Vi Movies
ವಿ ಐ ಮೂವಿ ಇದು ವೊಡಾಫೋನ್ ಕಂಪನಿಯಿಂದ ನಿರ್ಮಿಸಲ್ಪಟ್ಟಂತಹ ಅಪ್ಲಿಕೇಶನ್ ಆಗಿದ್ದು , ನೀವು ವೊಡಾಫೋನ್ ಚಂದಾದಾರರಾದರೇ ಉಚಿತವಾಗಿ ಕನ್ನಡ ಚಾನೆಲ್ ಗಳು ಮತ್ತು ಕೆಲವು Kannada Movies ವೀಕ್ಷಿಸಬಹುದು ನೀವು play store ನಿಂದ ಈ ಅಪ್ಲಿಕೇಶನ್ ಅನ್ನ ಡೌನ್ಲೋಡ್ ಮಾಡಿಕೊಳ್ಳಬಹುದು

MX Player
ಎಂ ಎಕ್ಸ್ ಪ್ಲೇಯರ್ ಇದು ನಿಮಗೆಲ್ಲ ತಿಳಿದಿರುವಂತಹ ಒಂದು ಅಪ್ಲಿಕೇಶನ್ ತುಂಬಾ ಜನ ಈಗಾಗಲೇ ಈ ಅಪ್ಲಿಕೇಶನ್ ಮೂಲಕ ವಿಡಿಯೋಗಳನ್ನು ವೀಕ್ಷಿಸಿರಬಹುದು. ಆದರೆ ಈಗ ಎಂ ಎಕ್ಸ್ ಪ್ಲೇಯರ್ ಒಂದು ವಿಡಿಯೋ ಪ್ಲ್ಯಾಟ್ ಫಾರ್ಮ್ ಆಗಿದ್ದು ಇದರಲ್ಲಿ ಕೂಡ ನೀವು ತುಂಬಾ ಚಲನಚಿತ್ರಗಳನ್ನ ಫ್ರೀಯಾಗಿ ಮತ್ತು ಪೇ ಮಾಡುವುದರ ಮೂಲಕ ವೀಕ್ಷಿಸಬಹುದು. ಇದಲ್ಲದೆ ಇದರಲ್ಲಿ ಇತರ ಭಾಷೆಯ ಚಲನಚಿತ್ರಗಳನ್ನು ಕೂಡ ವೀಕ್ಷಿಸಬಹುದು.

Cinebazzar
ಸಿನಿ ಬಜಾರ್ ಇದೊಂದು ಹೊಸ ಅಪ್ಲಿಕೇಶನ್ ಆಗಿದ್ದು ಇದರಲ್ಲಿ ವಿವಿಧ ರೀತಿಯ ಕನ್ನಡ ಸಿನಿಮಾಗಳು ಲಭ್ಯವಿವೆ. ಇದರಲ್ಲಿ ನೀವು ಫ್ರೀ ಯಾಗಿ ಕೂಡ ಅಥವಾ ಪೇ ಮಾಡಿ ಕೂಡ ವೀಕ್ಷಿಸಬಹುದು. ಈ ಅಪ್ಲಿಕೇಶನ್ ಮೊಬೈಲ್, ಲ್ಯಾಪ್ಟಾಪ್ ಮತ್ತು ಟಿವಿ ಗಳಲ್ಲಿಯೂ ಲಭ್ಯವಿದೆ. ಇದರಲ್ಲಿ ಯಾವುದೇ ರೀತಿಯ ಅಡ್ವಟೈಸ್ಮೆಂಟ್ ಮತ್ತು ಡಿಸ್ಟರ್ಬ್ ಇರುವುದಿಲ್ಲ.

Voot Select
Voot ಸೆಲೆಕ್ಟ್ ಇದೊಂದು ತುಂಬಾ ಚಿರಪರಿಚಿತವಾದಂತಹ ಅಪ್ಲಿಕೇಶನ್ ಇದರಲ್ಲಿ ನೀವು ಟಿವಿ ಧಾರವಾಹಿಗಳಿಂದ ಹಿಡಿದು ಇತರ ಭಾಷೆಯ ಸಿನಿಮಾ ಗಳನ್ನು ಕೂಡ ವೀಕ್ಷಿಸಬಹುದು. ಇದು ಮೊಬೈಲ್ ಅಪ್ಲಿಕೇಶನ್ ನಲ್ಲಿ ಅಥವಾ ಟಿವಿಯಲ್ಲಿ ಕೂಡ ವೀಕ್ಷಿಸಬಹುದು. ಆದರೆ ಹೆಚ್ಚಿನ ಮೂವಿಗಳನ್ನು ವೀಕ್ಷಿಸಲು ನೀವು ಹಣ ಪಾವತಿಸಬೇಕಾಗುತ್ತದೆ.

Eros Now
Eros Now ಇದೊಂದು ತುಂಬಾ ಹಳೆಯ ಕಂಪನಿಯಾಗಿದ್ದು ಇತ್ತೀಚಿಗೆ ವಿಡಿಯೋ ಪ್ಲ್ಯಾಟ್ ಫಾರ್ಮ್ ಆಗಿ ಪರಿವರ್ತನೆಗೊಂಡಿದೆ. ಇದರಲ್ಲಿ ಕನ್ನಡ ಸಿನಿಮಾಗಳಲ್ಲದೆ ಇಂಗ್ಲಿಷ್ ನಿಂದ ಡಬ್ ಮಾಡಲಾದಂತಹ ಹಾಲಿವುಡ್ ಮೂವಿಗಳನ್ನು ಕೂಡ ವೀಕ್ಷಿಸಬಹುದು. ಇವರು ಅಮೆಜಾನ್ ಜೊತೆಯಲ್ಲಿ ಒಪ್ಪಂದ ಮಾಡಿಕೊಂಡಿದ್ದು ನೀವು ಅಮೆಜಾನ್ನಲ್ಲಿಯೇ ಇವರ ವಿಡಿಯೋಸ್ ಗಳನ್ನು ವೀಕ್ಷಿಸಬಹುದು.

Airtel Xstream
Airtel Xstream ಇದು ಏರ್ಟೆಲ್ ಅವರ ಅಪ್ಲಿಕೇಶನ್ ಇದರಲ್ಲಿ ಎಲ್ಲಾ ಭಾಷೆಯ ಸಿನಿಮಾಗಳು ಮತ್ತು ಕಾರ್ಯಕ್ರಮಗಳು ಲಭ್ಯವಿವೆ. ನೀವು ಏರ್ಟೆಲ್ ಬಳಕೆದಾರರಾಗಿದ್ದಲ್ಲಿ ಉಚಿತವಾಗಿ ಈ ಅಪ್ಲಿಕೇಶನ್ ಅನ್ನು ಬಳಸಿಕೊಳ್ಳಬಹುದು. ಅಥವಾ ನಿಮ್ಮ ಬಳಿ ಸ್ಮಾರ್ಟ್ ಟಿವಿ ಇದ್ದರೆ ಟಿವಿಯಲ್ಲಿ ಕೂಡ ಏರ್ಟೆಲ್ ಎಕ್ಸ್ಟ್ರೀಮ್ ಅನ್ನ ಉಪಯೋಗಿಸಬಹುದು.

Discover more from Kannada Quotes, Movies & Stories
Subscribe to get the latest posts sent to your email.






