Kannada Stories in Kannada ಸಣ್ಣ ಕಥೆಗಳು – ಭಾಗ ೨

Kannada Stories: Explore a collection of inspiring, motivational, and thought-provoking tales from Karnataka, told in the rich language of Kannada.

Table of Contents

Father and SON

Kannada Stories in Kannada

Delve into the heart of Karnataka with these captivating Kannada Stories. Experience the warmth of family bonds, the wisdom of life’s lessons, and the rich cultural tapestry of the region, all told in the beautiful Kannada language. Whether you seek motivation, inspiration, or a glimpse into the lives of ordinary people, these Kannada stories in Kannada are sure to leave a lasting impression.

Father and SON

ನಮ್ಮವರಲ್ಲೇ ಒಳ ಸಂಚೇಕೆ

ಎಲ್ಲರೂ ನಮ್ಮವರೇ ಅಲ್ಲವೆ? ಆದರೂ ಈ ಒಳಸಂಚೇಕೆ? ನಂಜಿನ ಮಾತುಗಳು.. ಸಂಚಿನ ಕುರುಹುಗಳು.. ಜೊತೆಯಲ್ಲೇ ಇದ್ದು ಸಂಚು ಮಾಡಿ ನುಂಗುವರೇಕೆ? ಇರುವ ನಾಲ್ಕುದಿನ ಬಾಳಿಗೆ ಒಳಸಂಚೆಂಬ ಕ್ರೂರತ್ವ ಬೇಕೆ? ನಿಮ್ಮನ್ನು ನೀವು ಕ್ಷಮಿಸಿಕೊಳ್ಳಲಾರದ ತಪ್ಪಲ್ಲಿ ಒಳಸಂಚೂ ಸೇರಿದೆ ಅಲ್ಲವೆ?

ನನ್ನ ಪ್ರೀತಿಯ ಅಪ್ಪ

ಅಪ್ಪನೆಂಬ ಸಾಹುಕಾರ ಅವನ ಹೃದಯ ವಿಶಾಲ.. ಕನಸು ಹೊತ್ತ ಕಣ್ಗಳಲ್ಲಿ ಆಗಸ ನೋಡುತ್ತಿದ್ದರೆ ಅಪ್ಪನ ನೆನಪು. ಆಗಸದಲ್ಲೊಂದು ಕೌತುಕವಿದೆ. ಕತ್ತಲಲ್ಲೂ ಒಂದು ವಿಸ್ಮಯವಿದೆ ಅಂತ ತೋರಿಸಿ ಕೊಟ್ಟಿದ್ದು ನನ್ನ ಅಪ್ಪ. ನಾನೆಲ್ಲವನ್ನು ಕಳೆದುಕೊಂಡಾಗ ಮರಳಿ ಕೊಡಿಸಿದ್ದು ಅಪ್ಪ. ಹೃದಯದಲ್ಲೊಂದು ಪುಟ್ಟ ಗೂಡು ಕಟ್ಟಿ ನಾನೆತ್ತಲೊ ಹಾರಿ ಹೋಗೊ ಕನಸ ಹೊತ್ತೆ. ಆ ಕನಸಿಗೂ ರುವಾರಿಯಾಗಿ ಅಪ್ಪನಿದ್ದ. ಮತ್ತೊಮ್ಮೆ ನಾನು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಅಪ್ಪನ ಹಿಂದೆ ಓಡೊ ಹಾಗಿದ್ರೆ? ಕಳೆದು ಹೋದ ಕಾಲ ಮರಳಿ ಬರೊ ಹಾಗಿದ್ರೆ? ಎಂದೆಂದೂ ಮಗುವಾಗಿ ಅಪ್ಪನ ಮಡಿಲಲ್ಲಿ ಕೂತು ಕಥೆ ಕೇಳೊ ಹಾಗಿದ್ರೆ? ಈ ಬಾಳು ಅದೆಷ್ಟು ಚೆನ್ನ.. ಇರುವಾಗ ಅನುಭವಿಸಿದ ಸುಖದಲ್ಲಿ ಅಪ್ಪನ ಪಾಲೆ ಹೆಚ್ಚು. ನೀನು ತೋರಿಸಿಕೊಟ್ಟ ದಾರಿಲಿ ನಾನು ನಡೆಯುವುದೊಂದೆ ನನ್ನ ಕೊನೆಯ ಗುರಿ..

ಕಾಲ ಎಂದೂ ಹೀಗೆ ಇರಲ್ಲ

ಕಾಲ ಎಂದೂ ನಿಲ್ಲುವುದಿಲ್ಲ. ಇಂದು ಅವನತಿ ದಾರಿಯಲ್ಲಿ ನಿಮ್ಮ ಬದುಕು ಸಾಗುತ್ತಿರಬಹುದು. ಹಾಗೆಂದು ಜೀವನ ಮುಗಿದು ಹೋಗುವುದಿಲ್ಲ. ಕಾಲಚಕ್ರ ಒಮ್ಮೆ ಮೇಲೆ ಮತ್ತೊಮ್ಮೆ ಕೆಳಗೆ ಉರಿಳುವಂತೆ ಅವನತಿಯಿಂದ ನಿಮ್ಮ ಪಯಣ ಉನ್ನತಿಯ ಕಡೆಗೆ ಹೊರಳಬಹುದು.. ಬದುಕಿನಲ್ಲಿ ಎಂದೂ ಹೆದರ ಬೇಡಿ ಭರವಸೆಯನ್ನು ಕಳೆದುಕೊಳ್ಳಬೇಡಿ. ಉನ್ನತಿ ನಿಮ್ಮ ಹಿಂದೆ ಇರುವುದೆಂದು ಭಾವಸಿ.. ಆತ್ಮಸ್ಥೈರ್ಯಕ್ಕಿಂತ ದೊಡ್ಡದು ಯಾವುದು ಇಲ್ಲ? ಸಾವಿನ ದವಡೆಯಲ್ಲಿದ್ದವ ಬದುಕುಬಲ್ಲ. ನಿಮ್ಮ ಅವನತಿ ನಿಮ್ಮನ್ನ ನುಂಗದಿರಲಿ.. ಉನ್ನತಿಯೆಂಬ ಜ್ಯೋತಿ ಬಾಳನ್ನು ಬೆಳಗುವಂತೆ ಮಾಡಲು ಮನೋಶಕ್ತಿಯನ್ನು ಎಚ್ಚರಗೊಳಿಸಿ..

ನನಗೂ ಒಂದು ಮಗಳು ಬೇಕೆಂಬ ಅಸೆ ಇತ್ತು

ಮನದ ಮೂಲೆಯಲ್ಲೊಂದು ಆಸೆಯಿತ್ತು.. ನನಗೂ ಒಂದು ಮಗಳು ಬೇಕೆಂದು.. ಹುಟ್ಟಿದ ಮನೆ ಬೃಂದಾವನ ಮಾಡಿ..ಕೊಟ್ಟ ಮನೆಗೆ ಸಿಂಗಾರ ಮಾಡುವ ಹೆಣ್ಣು ಮಗು ಬೇಕೆಂದು.. ಪುಟ್ಟ ಝರಿ ಅಂಚಿನ ಲಂಗ ತೊಟ್ಟು ಅಂಗಳದ ರಂಗವಲ್ಲಿಒರೆಸುವಂತ ಚಿಕ್ಕ ಮಗಳು ನನಗೂ ಬೇಕೆಂದು.. ಪುಟ್ಟ ಓಲೆ ಜುಮುಕಿ ತೊಟ್ಟು ಮನೆತುಂಬ ಝಣ ಝಣ ಗೆಜ್ಜೆ ನಾದ ಮಾಡೊ ಮಗಳು ನನಗೂ ಬೇಕೆಂಬ ಹಂಬಲವಿತ್ತು.. ಮಗಳೆಂಬ ಆಸೆ ಆಸೆಯಾಗೆ ಉಳಿದಾಗ ಮನಸಿಗೆ ನೋವಾಗಿದ್ದಂತು ನಿಜವೆ.

ಒಂದು ನಿಸ್ವಾರ್ಥ ಹೆಣ್ಣಿನ ಕಥೆ

ಹೌದು, ಅವಳು ಹೆಣ್ಣು. ಸಮಾಜದ ನಿರೀಕ್ಷೆಗಳಿಗೆ ತಕ್ಕಂತೆ ನಡೆದುಕೊಳ್ಳುವ, ಮನೆಯ ಒಳಗಿನ ಕೆಲಸಗಳಿಗೆ ತನ್ನನ್ನು ಮೀಸಲಿಟ್ಟುಕೊಳ್ಳುವ ಒಬ್ಬ ಸಾಮಾನ್ಯ ಗೃಹಿಣಿ. ಆದರೆ, ಅವಳು ಸ್ವಾರ್ಥಿಯಲ್ಲ.

ಅವಳ ಗಂಡನ ಕಷ್ಟಗಳಲ್ಲಿ ಅವನ ಜೊತೆಗಿದ್ದಾಳೆ. ಮನೆಯ ಹೊರಗಿನ ಕೆಲಸಗಳಲ್ಲಿ ಅವನಿಗೆ ಬೆಂಬಲ ನೀಡುತ್ತಾಳೆ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತಾಳೆ. ಅವರ ಆರೋಗ್ಯ, ಶಿಕ್ಷಣದ ಕಾಳಜಿ ವಹಿಸುತ್ತಾಳೆ. ಅತ್ತೆ-ಮಾವನನ್ನು ತನ್ನ ತಂದೆ-ತಾಯಿಯಂತೆ ನೋಡಿಕೊಂಡು ಅವರ ಸೇವೆ ಮಾಡುತ್ತಾಳೆ.

ಅವಳ ಪ್ರೀತಿ, ಕಾಳಜಿ ಎಲ್ಲರಿಗೂ ಸಮಾನವಾಗಿ ಸಿಗುತ್ತದೆ. ತನ್ನ ಸ್ವಂತ ಆಸೆಗಳನ್ನು, ಖುಷಿಗಳನ್ನು ಮರೆಯುತ್ತಾ, ಕುಟುಂಬದ ಒಳಿತಿಗಾಗಿ ಯಾವಾಗಲೂ ತ್ಯಾಗ ಮಾಡುತ್ತಾಳೆ.

ಹೀಗಾಗಿ, ಒಬ್ಬ ಸ್ತ್ರೀ ಸ್ವಾರ್ಥಿ ಎಂಬ ಟೀಕೆಗೆ ಈಕೆ ಒಳಗಾಗುವುದಿಲ್ಲ. ಬದಲಾಗಿ, ತನ್ನ ನಿಸ್ವಾರ್ಥ ಪ್ರೀತಿ ಮತ್ತು ತ್ಯಾಗದ ಮೂಲಕ ಸಮಾಜದಲ್ಲಿ ಆದರ್ಶ  ಮಹಿಳೆಯಾಗಿ ಉಳಿಯುತ್ತಾಳೆ.

Conclusion:

These Kannada Stories offer a unique window into the soul of Karnataka. Through tales of love, loss, joy, and resilience, they remind us of the universal human experiences that connect us all. We hope these stories have resonated with you and sparked a deeper appreciation for the Kannada language and its rich storytelling tradition. Keep exploring, keep reading, and let the magic of Kannada stories continue to inspire you.

 

 

Read More –
Kannada Stories Part – 1

Kannada quotes

Follow our youtube channel

 


Discover more from Kannada Quotes, Movies & Stories

Subscribe to get the latest posts sent to your email.

Discover more from Kannada Quotes, Movies & Stories

Subscribe now to keep reading and get access to the full archive.

Continue reading

Discover more from Kannada Quotes, Movies & Stories

Subscribe now to keep reading and get access to the full archive.

Continue reading