Explore the world of Kannada moral stories with engaging tales that impart valuable lessons. This post features a compelling story that will not only entertain but also teach important life lessons. Whether you’re looking for Kannada baby stories or Kannada moral stories for kids, you’ll find inspiring content that is perfect for young minds, nurturing their character and understanding of the world around them.
Kannada Moral Stories: A Treasure of Wisdom and Fun
Dive into the captivating world of Kannada moral stories, where each tale is filled with timeless wisdom and life lessons. These stories, whether they are Kannada baby stories or Kannada moral stories for kids, offer a perfect blend of entertainment and education for young readers. The rich storytelling tradition of Kannada also extends to its movie culture, with many Kannada films drawing inspiration from these age-old tales. On our Kannada movie blog, we explore how these narratives influence films, adding layers of moral depth and cultural significance to cinematic works.
ಮಗುವಿನ ಮೊದಲ ಸ್ವತಂತ್ರ ಹೆಜ್ಜೆ ಶಾಲೆಯತ್ತ..

ಪ್ರತಿ ತಾಯಿಗೂ ತನ್ನ ಮಗುವಿನ ಜೊತೆ ಇರೊ ಬಾಂಧವ್ಯನ ಯಾವ ಪದಗಳಲ್ಲೂ ವರ್ಣಿಸೋಕೆ ಸಾಧ್ಯ ಆಗೋದಿಲ್ಲ. ಅಂಥ ವಿಶೇಷ ಪ್ರೀತಿ, ಮಮತೆ ಆ ತಾಯಿಯಲ್ಲಿ ತುಂಬಿರತ್ತೆ.
ಮಗುವಿನ ಹುಟ್ಟು ಅವ್ಳಿಗೆ ಮರು ಜನ್ಮ. ಮೊದಲ ಹೆರಿಗೆ ನಂತ್ರ ಅವಳು ಮಗುವಿನ ಲಾಲನೆ, ಪಾಲನೆ, ಪೋಷಣೆಲೆ ಅವ್ಳ ಎಲ್ಲ ಕಷ್ಟ ನೋವನ್ನ ಮರಿತಾಳೆ. ಮಗು ಮೊದಲ ಸಲ ಅಂಬೆಗಾಲಿಟ್ಟಾಗ, ಆ ಮಗುವಿನಂತೆ ಅಮ್ಮ ಸಂಭ್ರಮಿಸ್ತಾಳೆ. ಮಗು ಎಲ್ಲಿ ಬೀಳತ್ತೊ, ಅದ್ಕೇನಾದ್ರು ಅಗ್ಬಿಡುತ್ತೊ, ಇವತ್ಯಾಕೊ ತುಂಬ ಅಳ್ತಾನಲ್ಲ ಆರೋಗ್ಯ ಸರಿ ಇಲ್ವೇನೊ? ಅನ್ನೋ ಯೋಚ್ನೇಲೆ ಅವ್ಳು ಮನೆ ಕೆಲಸ ಮುಗ್ಸತಾಳೆ.
ಪ್ರತಿ ಒಂದು ನಿಮಿಷನು ಮಗುವಿನ ಮೇಲೆ ಅವಳ ಸಂಪೂರ್ಣ ಗಮನ ಇರುತ್ತೆ ಅಂದ್ರು ತಪ್ಪಿಲ್ಲ. ಅಮ್ಮನ ಪ್ರೀತಿ, ಕಾಳಜಿಯಿಂದ ಮಕ್ಳು ಬೇಗ ಬೆಳದ್ರು ತಾಯಿ ಕಣ್ಣಿಗೆ ಮಕ್ಕಳು ಮಗುಥರನೇ ಕಾಣಿಸ್ತಾರೆ.
ಸದಾ ನನ್ನ ಜೊತೆಲೆ ಇರ್ತಿದ್ದ ಮಗುನ ಮೊದಲ ಬಾರಿಗೆ ಶಾಲೆಗೆ ಕಳಿಸೊವಾಗ ನನ್ನ ಕಣ್ಣು ತುಂಬಿ ಬಂದಿದ್ದು ನಿಜ. ಒಂಟಿಯಾಗಿ ಬೆಳೆದ ನನ್ನ ಮಗ ಶಾಲೆ ಅನ್ನೋ ಪ್ರಪಂಚಕ್ಕೆ ಹೋಗಬೇಕು. ಎಲ್ಲಾ ಮಕ್ಕಳ ಜೊತೆ ಬೆರಿಬೇಕು. ಎಲ್ಲರಂತೆ ಓದಬೇಕು ಈ ದೇಶಕ್ಕೆ ಒಳ್ಳೆ ಪ್ರಜೆ ಆಗಿರ್ಬೇಕು ಅನ್ನೋ ಆಶಯ ನನ್ನ ಭಾವನೆನ ಹಿಡದಿಟ್ಕೊಳೊ ಹಾಗೆ ಮಾಡ್ತು.
ಕಣ್ಣೀರು ಹಾಕ್ತ ʼʼಅಮ್ಮ ನೀನು ಬಾ ಶಾಲೆಗೆ. ನಾನೊಬ್ಬನೆ ಅಲ್ಲಿ ಹೋಗೊದಿಲ್ಲ. ಅಲ್ಲಿ ಟೀಚರ್ ಕೋಲಿಟ್ಕೊಂಡಿದಾರೆ. ನಂಗೆ ಭಯ ಆಗತ್ತಮ್ಮʼʼ ಅಂತ ಮುದ್ದಾಗಿ ಹೇಳಿ ನನ್ನ ಕೈ ಹಿಡದು ಎಳಿತಿರೊ ಮಗನಿಗೆ ನಾನು ಹೇಗೆ ತಾನೆ ರೇಗಲಿ.
ನೀನು ಕ್ಲಾಸಲ್ಲಿ ಕೂತಿರು. ನಾನು ಹೊರಗಡೆನೆ ನಿಂತಿರ್ತೀನಿ ಅಂತ ಪೂಸಿ ಹೊಡೆದೆ. ಹೇಗ್ ಹೋಗೊ ನಂಬಿಸಿ ಕ್ಲಾಸ್ ರೂಮ್ ಒಳ್ಗಡೆ ಕೂರಿಸಿ ಬರೊವರಗೆ ನಾನು ಕಲಿತ ಎಲ್ಲ ವಿದ್ಯೆನು ಖಾಲಿ ಆಗಿದೆ ಅನಿಸ್ತು.
ಸಪ್ಪೆ ಮುಖ ಮಾಡ್ಕೊಂಡು ನಾನು ಹೋಗೊದನ್ನೆ ನೊಡ್ತ ಕೂತಿದ್ದ ಮಗನ್ನ ನೋಡಿ ನನ್ನ ಎದೇಲು ಹೇಳಲಾರದ ಸಂಕ್ಟ. ಮೂರುವರೆ ವರ್ಷದಿಂದ ಅವನು ಪ್ರತಿ ಕ್ಷಣನು ನನ್ನ ಜೊತೆನೆ ಇದ್ದ. ಇದೆ ಮೊದಲನೇ ಸಲ ಶಾಲೆ ಎಂಬ ಗೂಡಿಗೆ ಮರಿ ಹಕ್ಕಿಯಾಗಿ ಹೊಗಿತ್ತು ನನ್ನ ಮಗು.
ʼʼಶಾಲೆ ಬಿಡೊ ವರೆಗೂ ಹೊರಗಡೆ ಕಾಯ್ತಿರ್ತೀನಿ ಕಣೊʼʼ ಅಂತ ಸುಳ್ ಹೇಳಿ ಅವ್ನಿಗೆ ಗೊತ್ತಾಗದ ಹಾಗೆ ನಾನು ಮನೆಗೆ ಹೊರ್ಟೊಗಿದ್ದೆ. ಮಗುಗೆ ಸುಳ್ ಹೇಳಿದ್ದಕ್ಕೆ ಆ ದಿನ ಪೂರ್ತಿ ನಾನು ಗಿಲ್ಟ್ ಫೀಲ್ ಮಾಡ್ಕೊಂಡೆ.
ಪದೇ ಪದೇ ಗಂಟೆ ನೋಡೋದು ʼʼಮಗುಗೆ ಹಸ್ವಾಯ್ತೇನೊ? ದಿನಾಲೂ ಈ ಟೈಮ್ಗೆ ಅವನು ಹಾಲು ಕಡಿತಿದ್ದ. ಇಷ್ಟೊತ್ತಿಗೆ ಬಿಸ್ಕಿಟ್ ತಿಂತ ಇದ್ದ. ಮಗುಗೆ ನಿದ್ದೆ ಬಂತೆನೊ?ʼʼ ಅಂತ ಅವನು ಬರೊ ವರ್ಗೂ ಯೋಚ್ನೇಲೆ ಮನೆ ಕೆಲಸ ಮಾಡ್ತಿದ್ದೆ.
ಸ್ಕೂಲ್ ಬಿಡೊ ಟೈಮ್ ಒಳಗೆ ನಾನು ಅಲ್ಲಿ ಹೋಗಿ ಕಾಯ್ತಿದ್ದೆ. ಸಪ್ಪೆ ಮುಖ ಮಾಡ್ಕೊಂಡು ಬ್ಯಾಗ್ ಹಿಡ್ಕೊಂಡು ಹೊರಗಡೆ ಬಂದ ಮಗ ನನ್ನ ನೋಡಿ ಖುಷಿಯಿಂದ ನಕ್ಕಾಗ ನನ್ನ ಹೃದಯಕ್ಕೆ ಸಮಾಧಾನ ಸಿಕ್ಕಿದ್ದು.
ʼʼಅಮ್ಮ.. ನೀನು ಇಲ್ಲೇ ನಿಂತಿದ್ಯ? ನೀನು ನನ್ನ ಬಿಟ್ಟು ಹೊರ್ಟೋದ್ಯೆನೊ ಅಂತ ನಂಗೆ ಭಯ ಆಗಿತ್ತುʼʼ ಅಂತ ಮಗು ಹೇಳ್ದಾಗ ನನ್ನ ಕಣ್ಣಲ್ಲಿ ನೀರು ತುಂಬ್ಕೊಂಡ್ತು. ತುಂಬ ಭಾವುಕನಾಗಿ ನಾನು ಹೇಳ್ದೆ ʼʼಪುಟಾ.. ದಿನಾಲೂ ನಾನು ಇಲ್ಲೇ ನಿಂತಿರ್ತೀನಿ. ನೀನೆನೂ ಭಯಪಡ್ಬೇಡ, ನಿನ್ ಜೊತೆ ನಾನು ಯಾವಾಗ್ಲೂ ಇರತೀನಿ ಕಣೊʼʼ
ನನ್ನ ಮಾತನ್ನ ಕೇಳಿ ಮಗು ಮುಖದಲ್ಲಿ ನಗು ಮೂಡ್ತು. ಮಗುವಿನ ಮೊದಲ ಸ್ವತಂತ್ರ ಹೆಜ್ಜೆ ಶಾಲೆಯಿಂದ ಪ್ರಾರಂಭ ಆಗಬೇಕು ಅನ್ನೋದಿಕ್ಕೆ ನನ್ನ ಮನಸು ಕ್ರಮೇಣ ಹೊಂದಿಕೊಳ್ಳೋದಿಕ್ಕೆ ಪ್ರಾರಂಭಿಸ್ತು.
Check Other Categories
Discover more from Kannada Movie Blog
Subscribe to get the latest posts sent to your email.